RSS

ಒಂದು ಅರ್ಥಪೂರ್ಣ ವಿಡಿಯೋ

ಶುಭಾ ಮುದ್ಗಲ್ ಭಾರತ ಪಾಪ್ ಸಂಗೀತಪ್ರಿಯರ ಆರಾಧ್ಯ ದೈವ ಅಂತಲೇ ಹೇಳಬಹುದು. ವಿಭಿನ್ನ, ವಿಶಿಷ್ಟ, ವಿಶೇಷ ಕಂಠಕ್ಕೆ ಶುಭಾ ಮುದ್ಗಲ್ ಪ್ರಖ್ಯಾತರು. "ಆಯೋ ರೇ ಆಯೋ ರೇ ಆಯೋರೆ ಮಾರೋ ಧೋಲ್ನಾ...." ನಲ್ಲಿ ಮಲೈಕಾ ಅರೋರಾ ಮಿಂಚಿದ್ದಕ್ಕಿಂತಾ ಹೆಚ್ಚು ಮಿಂಚಿದ್ದು ಶುಭಾ ಮುದ್ಗಲ್ ರ ಕಂಠ. ಚಲನಚಿತ್ರ ಗೀತೆಗಳಲ್ಲಿ ಶುಭಾ ಹಾಡಿದ್ದು ಕಡಿಮೆ. ನಾನು ಢೋಲ್ನಾ ಕಾಲದಿಂದಲೂ ಅವರ ಅಭಿಮಾನಿ. ಕೆಳಗೊಂದು ವಿಡಿಯೋ ಇದೆ. ಇದು ಬಾಲಕಾರ್ಮಿಕರ ಬಗ್ಗೆ ತೆಗೆದಿರುವ ವಿಡಿಯೋ. ಆ ಪುಟ್ಟ ಹುಡುಗಿ ಪ್ರಪಂಚದ ಸಮಸ್ತ ಬಾಲಕಾರ್ಮಿಕರ ದನಿಯಾಗುತ್ತಾಳೆ. ಅವಳ ಧ್ವನಿಯಾಗಿ ಶುಭಾ ಮುದ್ಗಲ್. ಅವರ ಕಂಠ ಕಂಚಿನಂತಿದ್ದರೂ ಇಲ್ಲಿ ತಂಬೂರಿ ಮೀಟಿದಂತೆ ನವಿರಾಗಿ ಹಾಡಿ ಶುಭಾ ಮತ್ತು ಆ ಹುಡುಗಿ ನಮ್ಮ ಮನಸ್ಸನ್ನು ಆಕ್ರಮಿಸಿಬಿಡುತ್ತಾರೆ. ಬಾಲಕಾರ್ಮಿಕರನ್ನು ನೋಡಿದಾಗಲೆಲ್ಲಾ ಈ ವಿಡಿಯೋ ನೆನಪಾಗಲಿ ಎಂದು ಆಶಿಸುತ್ತಾ, ವಿಡಿಯೋ ಇಲ್ಲಿ ಹಾಕುತ್ತಿದ್ದೇನೆ.