RSS

ಒಂದು ಅರ್ಥಪೂರ್ಣ ವಿಡಿಯೋ

ಶುಭಾ ಮುದ್ಗಲ್ ಭಾರತ ಪಾಪ್ ಸಂಗೀತಪ್ರಿಯರ ಆರಾಧ್ಯ ದೈವ ಅಂತಲೇ ಹೇಳಬಹುದು. ವಿಭಿನ್ನ, ವಿಶಿಷ್ಟ, ವಿಶೇಷ ಕಂಠಕ್ಕೆ ಶುಭಾ ಮುದ್ಗಲ್ ಪ್ರಖ್ಯಾತರು. "ಆಯೋ ರೇ ಆಯೋ ರೇ ಆಯೋರೆ ಮಾರೋ ಧೋಲ್ನಾ...." ನಲ್ಲಿ ಮಲೈಕಾ ಅರೋರಾ ಮಿಂಚಿದ್ದಕ್ಕಿಂತಾ ಹೆಚ್ಚು ಮಿಂಚಿದ್ದು ಶುಭಾ ಮುದ್ಗಲ್ ರ ಕಂಠ. ಚಲನಚಿತ್ರ ಗೀತೆಗಳಲ್ಲಿ ಶುಭಾ ಹಾಡಿದ್ದು ಕಡಿಮೆ. ನಾನು ಢೋಲ್ನಾ ಕಾಲದಿಂದಲೂ ಅವರ ಅಭಿಮಾನಿ. ಕೆಳಗೊಂದು ವಿಡಿಯೋ ಇದೆ. ಇದು ಬಾಲಕಾರ್ಮಿಕರ ಬಗ್ಗೆ ತೆಗೆದಿರುವ ವಿಡಿಯೋ. ಆ ಪುಟ್ಟ ಹುಡುಗಿ ಪ್ರಪಂಚದ ಸಮಸ್ತ ಬಾಲಕಾರ್ಮಿಕರ ದನಿಯಾಗುತ್ತಾಳೆ. ಅವಳ ಧ್ವನಿಯಾಗಿ ಶುಭಾ ಮುದ್ಗಲ್. ಅವರ ಕಂಠ ಕಂಚಿನಂತಿದ್ದರೂ ಇಲ್ಲಿ ತಂಬೂರಿ ಮೀಟಿದಂತೆ ನವಿರಾಗಿ ಹಾಡಿ ಶುಭಾ ಮತ್ತು ಆ ಹುಡುಗಿ ನಮ್ಮ ಮನಸ್ಸನ್ನು ಆಕ್ರಮಿಸಿಬಿಡುತ್ತಾರೆ. ಬಾಲಕಾರ್ಮಿಕರನ್ನು ನೋಡಿದಾಗಲೆಲ್ಲಾ ಈ ವಿಡಿಯೋ ನೆನಪಾಗಲಿ ಎಂದು ಆಶಿಸುತ್ತಾ, ವಿಡಿಯೋ ಇಲ್ಲಿ ಹಾಕುತ್ತಿದ್ದೇನೆ.


Rockford




ಈ ಹಾಡನ್ನು ಕೇಳಿ ತಲೆದೂಗದವರಿಲ್ಲ ಪ್ರಾಯಶಃ ! Rockford ಚಿತ್ರದಲ್ಲಿ ಈ ಹಾಡು ಇದೆ . ನಾನು ಏನೇ ಹೊಸ ಕೆಲಸ ಪ್ರಾರಂಭಿಸಬೇಕಿದ್ದರೂ ಮೊದಲು ಈ ಹಾಡನ್ನು ಕೇಳಿಯೇ ಪ್ರಾರಂಭಿಸೋದು. [ದೇವರನ್ನು ನೆನಪಿಸಿಕೊಂಡಮೇಲೆ ಅಂತ ಇಟ್ಟುಕೊಳ್ಳಿ !] One of my all time favourites ಈ ಹಾಡು.ನೀವೂ ಕೇಳಿ !

ನಗುಮೋಮು-ತ್ಯಾಗರಾಜರ ಕೃತಿ

ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ ನನ್ನ ಅತ್ಯಂತ ಪ್ರಿಯವಾದ ರಾಗ ಮತ್ತು ಅತ್ಯಂತ ಪ್ರಿಯವಾದ ತ್ಯಾಗರಾಜ ಕೃತಿ. ಇದು ಬಹಳ ಪ್ರಸಿದ್ಧವಾದದ್ದಾದ್ದರಿಂದ ಈ ಕೀರ್ತನೆಯ ಬಗ್ಗೆ ಹೆಚ್ಚು ಹೇಳೋದಿಲ್ಲ.ರಾಗ ಅಭೇರಿ, ಕೀರ್ತನೆ ನಗುಮೋಮು ಕನಲೇನಿ. ಕೇಳಿ ಆನಂದಿಸಿ. ಸಂಗೀತ ಸಾಮ್ರಾಜ್ಞಿ ಎಮ್. ಎಸ್ ಸುಬ್ಬುಲಕ್ಷ್ಮೀಯವರ ಕಂಠಸಿರಿಯಲ್ಲಿ ಇದನ್ನು ಕೇಳುವ ಆನಂದವೇ ಬೇರೆ !



Sirf tum - run

ಈ ಚಿತ್ರ ಬಿಡುಗಡೆಯಾದಾಗ ನಾನು ಹತ್ತನೇ ಕ್ಲಾಸಲ್ಲಿ ಇದ್ದೆ ಅಂತ ಕಾಣತ್ತೆ. ನನಗೆ ಚಿತ್ರದ ಹೆಸರು ನೆನಪಿರಲಿಲ್ಲ, ಆದರೆ ಈ ಹಾಡು ಮಾತ್ರ ನೆನಪಿನಿಂದ ಹೊರಹೋಗಲೇ ಇಲ್ಲ. ನೆನ್ನೆ ಈ ಚಲನಚಿತ್ರ ಪ್ರಸಾರವಾಗುತ್ತಿದ್ದಾಗ ಈ ಹಾಡು ನೋಡಿದೆ. ಅದಕ್ಕೆ ನಿಮ್ಮೊಂದಿಗೆ ಈ ಹಾಡನ್ನು ಹಂಚಿಕೊಳ್ಳುತ್ತಿದ್ದೇನೆ.

ಅಭಿಷೇಕ್ ಬಚ್ಚನ್ ನ ಕಟ್ಟಾ ಅಭಿಮಾನಿಯಾದ ನನಗೆ ಈ ಹಾಡಲ್ಲಿ ಕಾಣುವ ಅಭಿಷೇಕ್ ನ possessiveness ಮತ್ತು ಕಿವಿಗೆ ಇಂಪಾಗಿರುವ ಸೋನುವಿನ ಆ ಮೋಹಕ ಗಾಯನ ಬಹಳ ಕಾಡಿದೆ. ಕಂಠದಲ್ಲೇ ಪೊಸೆಸಿವ್ ನೆಸ್ ತೋರಿಸಿರುವ ಸೋನುಗೆ ಸಲಾಂ. ಅಭಿಷೇಕ್ ನದ್ದು ಸ್ವಲ್ಪ overacting ಅನಿಸಿದರೂ ಹಾಡಿನ ಮಾಧುರ್ಯ ಅವನ ಅಭಿನಯವನ್ನು ಮರೆಮಾಚುತ್ತದೆ. ನಿಜಜೀವನದಲ್ಲಿ ಇಂಥದ್ದೆಲ್ಲಾ ಸಾಧ್ಯವಿಲ್ಲದಿದ್ದರೂ ಕೆಲಕಾಲ ಮನಸ್ಸು ಕಲ್ಪನಾಲೋಕದಲ್ಲಿ ವಿಹರಿಸಲು ಇಂಥಾ ಹಾಡುಗಳು ಅವಕಾಶ ಮಾಡಿಕೊಡುತ್ತದೆ. ಅಲ್ಲವೇ ? "ರನ್" ಚಿತ್ರದ " ಚೈನ್ ಹೋ ಚೈನ್ ಹೋ ಮೇರೆ ದಿಲ್ ಕಾ..." ಹಾಡಿನ ವಿಡಿಯೋ ಇದು. ನೋಡಿ ಆನಂದಿಸಿ.


ನಮಸ್ಕಾರ

ನಮಸ್ಕಾರ ಓದುಗರಿಗೆ, ಅಲ್ಲಲ್ಲಾ ಕೇಳುಗರಿಗೆ !

ನನಗೆ ಇಷ್ಟವಾದ ಹಾಡುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಇದು. ಹಾಡುಗಳ ವಿಮರ್ಶೆ ಮಾಡುವಷ್ಟು ದೊಡ್ಡವಳು ನಾನಲ್ಲ. ಅದಕ್ಕೆ ಹಾಡು ನನಗಿಷ್ಟವಾಗಲು ಕಾರಣವೇನು ಅಂತಷ್ಟೇ ಹೇಳಬಲ್ಲೆ. ನಿಮಗೂ ಈ ಹಾಡು ಇಷ್ಟವಾಯ್ತೆಂದರೆ ಏಕೆ ಇಷ್ಟವಾಯಿತು ಎಂದು ಖಂಡಿತಾ ಹಂಚಿಕೊಳ್ಳಬಹುದು. ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳು, ಭಾವಗೀತೆಗಳು ಮತ್ತು ಗಜಲ್ ಗಳನ್ನು ಹಾಕುವ ಉದ್ದೇಶವಿದೆ. ನನ್ನ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.