RSS

Sirf tum - run

ಈ ಚಿತ್ರ ಬಿಡುಗಡೆಯಾದಾಗ ನಾನು ಹತ್ತನೇ ಕ್ಲಾಸಲ್ಲಿ ಇದ್ದೆ ಅಂತ ಕಾಣತ್ತೆ. ನನಗೆ ಚಿತ್ರದ ಹೆಸರು ನೆನಪಿರಲಿಲ್ಲ, ಆದರೆ ಈ ಹಾಡು ಮಾತ್ರ ನೆನಪಿನಿಂದ ಹೊರಹೋಗಲೇ ಇಲ್ಲ. ನೆನ್ನೆ ಈ ಚಲನಚಿತ್ರ ಪ್ರಸಾರವಾಗುತ್ತಿದ್ದಾಗ ಈ ಹಾಡು ನೋಡಿದೆ. ಅದಕ್ಕೆ ನಿಮ್ಮೊಂದಿಗೆ ಈ ಹಾಡನ್ನು ಹಂಚಿಕೊಳ್ಳುತ್ತಿದ್ದೇನೆ.

ಅಭಿಷೇಕ್ ಬಚ್ಚನ್ ನ ಕಟ್ಟಾ ಅಭಿಮಾನಿಯಾದ ನನಗೆ ಈ ಹಾಡಲ್ಲಿ ಕಾಣುವ ಅಭಿಷೇಕ್ ನ possessiveness ಮತ್ತು ಕಿವಿಗೆ ಇಂಪಾಗಿರುವ ಸೋನುವಿನ ಆ ಮೋಹಕ ಗಾಯನ ಬಹಳ ಕಾಡಿದೆ. ಕಂಠದಲ್ಲೇ ಪೊಸೆಸಿವ್ ನೆಸ್ ತೋರಿಸಿರುವ ಸೋನುಗೆ ಸಲಾಂ. ಅಭಿಷೇಕ್ ನದ್ದು ಸ್ವಲ್ಪ overacting ಅನಿಸಿದರೂ ಹಾಡಿನ ಮಾಧುರ್ಯ ಅವನ ಅಭಿನಯವನ್ನು ಮರೆಮಾಚುತ್ತದೆ. ನಿಜಜೀವನದಲ್ಲಿ ಇಂಥದ್ದೆಲ್ಲಾ ಸಾಧ್ಯವಿಲ್ಲದಿದ್ದರೂ ಕೆಲಕಾಲ ಮನಸ್ಸು ಕಲ್ಪನಾಲೋಕದಲ್ಲಿ ವಿಹರಿಸಲು ಇಂಥಾ ಹಾಡುಗಳು ಅವಕಾಶ ಮಾಡಿಕೊಡುತ್ತದೆ. ಅಲ್ಲವೇ ? "ರನ್" ಚಿತ್ರದ " ಚೈನ್ ಹೋ ಚೈನ್ ಹೋ ಮೇರೆ ದಿಲ್ ಕಾ..." ಹಾಡಿನ ವಿಡಿಯೋ ಇದು. ನೋಡಿ ಆನಂದಿಸಿ.


1 comments:

PaLa said...

"ಪಲ್ಲವಿ ಅನುಪಲ್ಲವಿ" - ಹೆಸ್ರಿಟ್ಟಿದ್ದಕ್ಕಾದ್ರೂ "ನಗುವ ನಯನ, ಮಧುರ ಮೌನ" ಹಾಡಿಂದ ಆರಂಭ ಮಾಡ್ತೀರ ಅಂದ್ಕೊಂಡಿದ್ದೆ. ನೋಡಿದ್ರೆ ಯಾವ್ದೋ ಡಬ್ಬಾ ಹಾಡು, ಜೊತೆಗೆ ಅಭಿಷೇಕ್ ಡಬ್ಬಾ ಆಕ್ಟಿಂಗ್.. ಭೂಮಿಕಾನ ನೋಡಬಹುದು ಅಷ್ಟೆ.

Post a Comment