RSS

ನಮಸ್ಕಾರ

ನಮಸ್ಕಾರ ಓದುಗರಿಗೆ, ಅಲ್ಲಲ್ಲಾ ಕೇಳುಗರಿಗೆ !

ನನಗೆ ಇಷ್ಟವಾದ ಹಾಡುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಇದು. ಹಾಡುಗಳ ವಿಮರ್ಶೆ ಮಾಡುವಷ್ಟು ದೊಡ್ಡವಳು ನಾನಲ್ಲ. ಅದಕ್ಕೆ ಹಾಡು ನನಗಿಷ್ಟವಾಗಲು ಕಾರಣವೇನು ಅಂತಷ್ಟೇ ಹೇಳಬಲ್ಲೆ. ನಿಮಗೂ ಈ ಹಾಡು ಇಷ್ಟವಾಯ್ತೆಂದರೆ ಏಕೆ ಇಷ್ಟವಾಯಿತು ಎಂದು ಖಂಡಿತಾ ಹಂಚಿಕೊಳ್ಳಬಹುದು. ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳು, ಭಾವಗೀತೆಗಳು ಮತ್ತು ಗಜಲ್ ಗಳನ್ನು ಹಾಕುವ ಉದ್ದೇಶವಿದೆ. ನನ್ನ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.

3 comments:

ಅಂತರ್ವಾಣಿ said...

ಶುಭಾಶಯಗಳು :)
ಇದು ಒಳ್ಳೆ ಪ್ರಯತ್ನ ಹಾಗು ನನ್ನ ನೆಚ್ಚಿನ ಇಲಾಖೆ :)

ನನ್ನ ಮೆಚ್ಚಿನ ಹಾಡನ್ನು ನೀನು ಪೋಸ್ಟ್ ಮಾಡಿದರೆ... ಅದಕ್ಕೆ ನನ್ನ ಸ್ಪಂದನ (ದೊಡ್ಡ) ಇದ್ದೇ ಇರುತ್ತೆ. ನಾನು ಎಷ್ಟೋ ಹಾಡುಗಳ ಬಗ್ಗೆ ಬರೀ ಬೇಕು ಅಂದು ಕೊಂಡಿದ್ದೆ. ಇರುವ ಸಮಯವನ್ನು ಅದಕ್ಕೇ ಮೀಸಲು ಇಡುತ್ತೇನೆ.

ಒಳ್ಳೇದು ಆಗಲಿ ನಿನಗೆ.
ಸ ರಿ ಗ ಪ ದ ಸ.... ಸ ದ ಪ ಗ ರಿ ಸ :)

Harisha - ಹರೀಶ said...

ಶುಭಾಶಯ ... ಶುಭಾಶಯ...

ಅಂದ ಹಾಗೆ, ಎಷ್ಟನೇ ಬ್ಲಾಗು ಇದು?

PaLa said...

ಒಳ್ಳೇ ಪ್ರಯತ್ನ, ಶುಭಾಷಯ :)
ನಿಮಗೊಂದು ಒಳ್ಳೇ ಹಾಡು ಕೇಳ್ಸ್ತೀನಿ..

http://www.youtube.com/watch?v=cyAWpRb_33s

Post a Comment